You are currently viewing Eye Donation

Eye Donation

  • Post author:
  • Post category:News
Eye Donation of Shree Nanjappa Father of Ravindra Prasad Nosenoor to Narayana Netralaya Dr.Rajakumar Eye Bank

ಆನೇಕಲ್ ತಾಲ್ಲೂಕಿನ ನೊಸೇನೂರಿನ ಶ್ರೀ ನಂಜಪ್ಪನವರ ನೇತ್ರದಾನ
17.05.2026 : ನೊಸೇನೂರಿನ ಶ್ರೀ ನಂಜಪ್ಪನವರು 76 ವರ್ಷ ವಯೊಸಹಜ ಖಾಯಿಲೆಯಿಂದ ಮನೆಯಲ್ಲಿ ಮೃತಪಟ್ಟಿದ್ದು ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯದ ಡಾ.ರಾಜಕುಮಾರ್ ನೇತ್ರ ನಿದಿಗೆ ದಾನ ಮಾಡಿದ್ದಾರೆ.
ಮೃತರ ಪತ್ನಿ ಶ್ರೀಮತಿ ರತ್ನಮ್ಮ ಮಾತನಾಡಿ ನಮ್ಮ ಯಜಮಾನರು ನೇತ್ರದಾನ ನೊಂದಣೀಮಾಡಿದ್ದರು, ಅವರ ನೇತ್ರದಾನ ನಮ್ಮ ಕುಟುಂಬಕ್ಕೆ ಹೆಮ್ಮೆ ತಂದಿದೆ, ಅವರು ಇಂದು ನಮ್ಮೊಡನಿಲ್ಲ ಆದರೆ ಅವರ ಕಣ್ಣುಗಳು ಇಬ್ಬರು ಕಣ್ಣುಕಾಣದ ಇನ್ನಾರದೋ ಮನೆಯಲ್ಲಿ ನಾಳೆ ಹೊಸಬೆಳಕಾಗಿ ಬೆಳಗಲಿವೆ.
ಮೃತರ ಮಕ್ಕಳಾದ ರವಿಂದ್ರ ಪ್ರಸಾದ್, ಲೋಕೆಶ್ ಮಗಳಾದ ಗೀತಾ ತಮ್ಮ ಅಭಿಪ್ರಾಯದಲ್ಲಿ ಡಾ.ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ನೇತ್ರದಾನದ ಸ್ಪೂರ್ತಿ,ಇಡೀ ದೇಶವೇ ಹೆಮ್ಮಾರಿ ಕರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕಿನ ಜೀವನ ನೀಡಬೇಕೆಂದು ಅವರ ಕಳಕಳಿಯ ಪ್ರಾರ್ಥನೆ ಮಾಡುತ್ತಾ ಇನ್ನು ಮುಂದೆ ಸಂಬಂದೀಕರ, ಸ್ನೇಹಿತರ ಮನೆಗಳಲ್ಲಿ ಸಾವು ಸಂಭವಿಸಿದರೆ ತಾವು ಖುದ್ದು ನಿಂತು ನೇತ್ರದಾನ ಮಾಡಿಸುತ್ತೇವೆ ಎಂದಿದ್ದಾರೆ.

(ನೇತ್ರದಾನ – ಅಂಗಾಂಗ ದಾನ – ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ.
ನೇತ್ರದಾನ – ಅಂಗಾಂಗ ದಾನ – ದೇಹದಾನದ ಸಮಯ ಬಂದಾಗ,
ಕರ್ನಾಟಕ ಸರ್ಕಾರದ SOOTO, ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ ಸಹಾಯಕ್ಕಾಗಿ,
ರಂಖಾ ಜೈನ್ ಫೌಂಡೇಶನ್
Ranka Jain Foundation
+91 9620067800 ಸಂಪರ್ಕ ಮಾಡಬಹುದು).

ಈ ಮಹಾ ಕಾರ್ಯವನ್ನು ನೆರವೇರಿಸಿರುವಾಗ, ತೆಗೆದುಕೊಂಡ ಛಾಯಾಚಿತ್ರ.
ಮೃತರ ನೇತ್ರಗಳನ್ನು ಹಸ್ತಾಂತರಿಸುತ್ತಿರುವ ಮೃತರ ಪತ್ನಿ ಶ್ರೀಮತಿ ರತ್ನಮ್ಮ, ರವಿಂದ್ರ ಪ್ರಸಾದ್, ಲೋಕೆಶ್, ಮಗಳಾದ ಗೀತಾ . ಹೊಸಬೆಳಕು ಟ್ರಸ್ಟಿನ ಜಿಗಣಿರಾಮಕೃಷ್ಣ,ನಾಗೇಶ್,ನಾರಾಯಣ ನೇತ್ರಾಲಯದ ಡಾ.ಗೋವಿಂದ್ ಪ್ರದೀಪ್,ಲಕ್ಶ್ಮೀಪ್ರಿಯಾ,ಕುಟುಂಬಸ್ಥರು ಇದ್ದಾರೆ