CPI(M) ಮುಖಂಡ ಸಿದ್ದನಹಳ್ಳಿ ವಿ.ಶೇಖರ್ ಅವರ ತಾಯಿ ಗೌರಮ್ಮನವರ ನೇತ್ರದಾನ.
1೦-3-2026 CPIM ಮುಖಂಡ ಸಿದ್ದನಹಳ್ಳಿ ವಿ.ಶೇಖರ್ ಅವರ ತಾಯಿ ಶ್ರೀಮತಿ ಗೌರಮ್ಮನವರು ವಯೋಸಹಜವಾಗಿ ನಿಧನರಾಗಿದ್ದು,
ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯದ ಡಾಕ್ಟರ್ ರಾಜಕುಮಾರ್ ಐ ಬ್ಯಾಂಕಿಗೆ ದಾನ ಮಾಡಿದ್ದಾರೆ.
ಮೃತರ ಹಿರಿಯಮಗ ಮಗ ಶೇಖರ್ ಭಾವುಕರಾಗಿ ಮಾತನಾಡಿ ನನ್ನಮ್ಮನ ಇಚ್ಛೆಯಂತೆ ನೇತ್ರದಾನ ಮಾಡಿದ್ದೇವೆ, ಈ ಕಾಯಕ ಇಡೀ ನಮ್ಮ ಕುಟುಂಬಕ್ಕೆ ಗೌರವತಂದಿದೆ. ನನ್ನಮ್ಮನಂತೆ ತಾವುಗಳೆಲ್ಲರೂ ಅಂಗಾಂಗದಾನಕ್ಕೆ ಮುಂದಾಗಬೇಕೆಂದರು.
ಮತ್ತೊಬ್ಬ ಮಗ ಜಯಕುಮಾರ್ ನನ್ನ ತಾಯಿಯ ಕಣ್ಣುಗಳನ್ನು ದಾನ ಮಾಡಿದ್ದೇವೆ, ಆ ಕಣ್ಣುಗಳು ನಾಳೆ ಯಾರದೋ ಕಣ್ಣುಕಾಣದ ಇಬ್ಬರು ಕಾರ್ನಿಯಾ ಅಂಧರ ಮನೆಯಲ್ಲಿ ಹೊಸಬೆಳಕಿನ ಹೊಸಜೀವನ ತರಲಿವೆ ಎಂದರು.
ಮೃತರ ಸೊಸೆ ಮಾನಸ ಇಡೀ ದೇಶವೇ ಹೆಮ್ಮಾರಿ ಕರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸಾವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕು ನೀಡಬೇಕೆಂದು ಮನವಿ ಮಾಡುತ್ತಾ ಡಾ.ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ ಅವರು ನೇತ್ರದಾನಕ್ಕೆ ಸ್ಫೂರ್ತಿ ಎಂದರು.
(ಮಾಹಿತಿ ಹಂಚಿಕೆ, ಜಿಗಣಿ ರಾಮಕೃಷ್ಣ ಅವರ
ಹೊಸಬೆಳಕು ಟ್ರಸ್ಟ್)
